Home
ಸಂಕ್ಷಿಪ್ತ ವಿವರ:-
ವಿರಾಜಪೇಟೆ ಪಟ್ಟಣ ಪಂಚಾಯಿತಿಯು 1904ರಲ್ಲಿ ಸ್ಥಾಪನೆಯಾಯಿತು.ವಿರಾಜಪೇಟೆ ಪಟ್ಟಣ ಪಂಚಾಯಿತಿಯು ಮಡಿಕೇರಿನಿಂದ ಸುಮಾರು 30 ಕೀಲೋಮೀಟರ್ ದೂರ ಹಾಗು ಬೆಂಗಳೂರಿನಿಂದ ಸುಮಾರು 250 ಕೀಲೋಮೀಟರದಲ್ಲಿರುತ್ತದೆ.ಕೊಡಗಿನ ಹಿಂದಿನ ರಾಜನಾದ ವೀರರಾಜೇಂದ್ರರ ನೆನಪಿಗಾಗಿ ವೀರರಾಜೇಂದ್ರಪೇಟೆ ಎಂದು ಹೆಸರು ಬಂದಿತು. ಇದು ಸಂಕ್ಷಿಪ್ತಗೊಂಡು ‘ವಿರಾಜಪೇಟೆ’ ಎಂದಾಗಿದೆ. 2001 ರ ಜನಗಣತಿಯ ಪ್ರಕಾರ ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 15213 ಜನಸಂಖ್ಯೆಯನ್ನು ಹೊಂದಿರುತ್ತದೆ. ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 16 ವಾರ್ಡ್ ಗಳಿದ್ದು 16 ಚುನಾಯಿತ ಸದಸ್ಯರು ಹಾಗೂ 3 ನಾಮನಿರ್ದೇಶಿತ ಸದಸ್ಯರಿರುತ್ತಾರೆ.ವಿರಾಜಪೇಟೆ ಪಟ್ಟಣ ಪಂಚಾಯಿತಿಯು ವ್ಯಾಪ್ತಿಯು ಒಟ್ಟು 8.26 ಚದುರ ಕೀಲೋಮೀಟರ್ ಗಳಿರುತ್ತದೆ.
**********************************************************
Brief Introduction:- Virajpet Town Panchayath is formed in the year 1904.The total area covered by Town Panchayath is 8.26Kms.As per 2001 census the town population is 15213 out of which male population is 7742 and female is 7471.Town area is divided into 16 ward and has 16 Councilor and 3 Nominated councilor. The name is an abbreviation of Virarajendrapete after the former ruler of Kodagu, Virarajendra.It is situated at a a distance of 30Kms from Madikeri and about 250Kms from Bengaluru. Coffee and pepper plantation is the source of income and also one of the largest producers of honey in Asia.
*************************************************
ಗಣಕೀಕರಣ ಯೋಜನೆಗಳು:
ಜನನ-ಮರಣ(Birth and Death Online Application):
1999ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ಜನನ ಹಾಗು ಮರಣ ದಾಖಲೆಗಳು ಗಣಕೀಕರಣಗೊಳಿಸಲಾಗಿದೆ, ಸಾರ್ವಜನಿಕರು ಪಟ್ಟಣ ಪಂಚಾಯಿತಿಯ ಅಧಿಕೃತ ವೈಬ್ ಸೈಟ್ ಮೂಲಕ ದಾಖಲೆಗಳನ್ನು ಪರಿಶೀಲಿಸಬಹುದು ಹಾಗು ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ. 1990 ರಿಂದ 1998ರವರೆಗಿನ ಜನನ ಹಾಗು ಮರಣ ದಾಖಲೆಗಳ ಡಾಟಾ ಎಂಟ್ರಿ ಕಾರ್ಯ ಪ್ರಗತಿಯಲ್ಲಿದೆ ಈ ದಾಖಲೆಗಳನ್ನು ಸಹ ಶೀಘ್ರದಲ್ಲೇ online ಮುಖಾಂತರ ಪರಿಶೀಲಿಸಬಹುದು.ಅಧಿಕೃತ ವೆಬ್ ಸೈಟ್ link: http://www.virajpettown.gov.in/egbnd/index.jsp
ಸಾರ್ವಜನಿಕ ದೂರು ನಿವಾರಣಾ ಕೇಂದ್ರ(Public Grievance Redressal System (P.G.R)):
ಕೆ.ಎಂ.ಆರ್.ಪಿ ಯೋಜನೆಯಡಿ ಸಾರ್ವಜನಿಕ ದೂರು ನಿವಾರಣಾ ಕೇಂದ್ರ ತೆರೆಯಲಾಗಿದ್ದು, ಈ ಕೇಂದ್ರವು ವಾರದ 7 ದಿನಗಳು ಹಾಗೂ ದಿನದ 8 ಘಂಟೆಗಳು ಕಾರ್ಯನಿರ್ವಹಿಸಿರುತ್ತದೆ. ಸಾರ್ವಜನಿಕರು ದೂರುಗಳನ್ನು ಪತ್ರ, ದೂರವಾಣಿ ಹಾಗು ಆನ್ ಲೈನ್ ಆಪ್ಲೀಕೇಷನ್ ಮೂಲಕ ಸಲ್ಲಿಸಬಹುದು ಸಹಾಯವಾಣಿ: 08274-257715 ವೆಬ್ ಸೈಟ್ link: http://www.virajpettown.gov.in/pgr/grievance-redressal.jsp
ಸ್ಥಳೀಯ ಸಂಸ್ಥೆಯ ವೆಬ್ ಸೈಟ್:
ವಿರಾಜಪೇಟೆ ಪಟ್ಟಣ ಪಂಚಾಯಿತಿಯ ಅಧಿಕೃತ ಅಂತರ್ಜಾಲ http://www.virajpettown.gov.in/ ಸಾರ್ವಜನಿಕರಿಗೆ ಬೇಕಾದ ಕಛೇರಿ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.
ಭೌಗೋಳಿಕ ಆಸ್ತಿ ತೆರಿಗೆ ಯೋಜನೆ:
ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬರುವ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ.

